ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ನಟಿ ಹೇಮಾ ಚೌಧರಿ; ದೇವರಿಗೆ ವಿಶೇಷ ಪೂಜೆ
Oct 16, 2024 180
ಕೆಲವು ತಿಂಗಳ ಹಿಂದೆ ಹಿರಿಯ ನಟಿ ಹೇಮಾ ಚೌಧರಿ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಆಗ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಹೇಮಾ ಚೌಧರಿ ಅವರು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಪೂಜೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆಯರು ಭಾಗಿಯಾಗಿದ್ದರು.ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ ನಟಿ ಹೇಮಾ ಚೌಧರಿ ಅವರು ಅನಾರೋಗ್ಯದ ಬಳಿಕ ಚೇತರಿಕೆ ಕಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಅವರಿಗೆ ಬ್ರೇನ್ ಹೆಮರೇಜ್ ಆಗಿತ್ತು. ಆಗ ಸರ್ಜರಿಗೆ ಒಳಗಾಗಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ.